ನಿನ್ನ ಉದ್ಯೋಗಿಗಳು ಕೊನೆಯವರೆಗೂ ಕಲಿಯುವ ಇಂಗ್ಲಿಷ್ ಕೋರ್ಸ್.
Tutoro ಜೊತೆ ಪ್ರತಿಯೊಬ್ಬ ಉದ್ಯೋಗಿಗೂ ಅವರದೇ AI ಇಂಗ್ಲಿಷ್ ಶಿಕ್ಷಕ ಸಿಗುತ್ತಾನೆ. ಖಾಸಗಿ ಶಿಕ್ಷಕರ ಬಳಿ ಕಲಿಯುವಷ್ಟೇ ಉತ್ತಮ ಪಾಠಗಳು. ಪ್ರತಿದಿನ ಮತ್ತೆ ಕಲಿಯಬೇಕೆನಿಸುವಷ್ಟು ಆಸಕ್ತಿಕರ.
ಆರಂಭಿಸು
ಡೆಮೊ ಬುಕ್ ಮಾಡು
ಪ್ರತಿ ಉದ್ಯೋಗಿಗೆ ತಿಂಗಳಿಗೆ ಕೇವಲ $9 ಇಂದ ಆರಂಭ. ಯಾವಾಗ ಬೇಕಾದರೂ ಚಂದಾ ರದ್ದುಮಾಡಬಹುದು.
Tutoro ಹೇಗೆ ಕೆಲಸ ಮಾಡುತ್ತದೆ · 2 ನಿಮಿಷ
ಹೇಗೆ ಕೆಲಸ ಮಾಡುತ್ತದೆ ನೋಡು
ವೀಡಿಯೊ ಮುಚ್ಚು
ಹೊಸ ಹಂತ ತಲುಪಿದ್ದಾರೆ!
A1 → A2
+ 138 XP
ಇದುವರೆಗಿನ ಅತ್ಯುತ್ತಮ ದಿನ
ಮುಖಾಮುಖಿ ಸ್ಪರ್ಧೆಯಲ್ಲಿ ಗೆಲುವು
3 ಸುತ್ತುಗಳಲ್ಲಿ ಗೆಲುವು, 1ರಲ್ಲಿ ಸೋಲು
ಇಂದಿನ ಎಲ್ಲ ಕೆಲಸಗಳು ಮುಗಿದವು
3 / 3
30 ದಿನಗಳ Streak
ಒಂದು ದಿನವೂ ತಪ್ಪಿಸಿಲ್ಲ
+ 250 ನಾಣ್ಯಗಳು
ವಾರದ ಬೋನಸ್
ಮುಂದಿನ ಹಂತಕ್ಕೆ!
A2 → B1
ಲೀಗ್‌ನಲ್ಲಿ ಮೊದಲ ಸ್ಥಾನ
30 ಜನರಲ್ಲಿ 1ನೇ ಸ್ಥಾನ
ಹೊಸ ಶಿಕ್ಷಕರು ಈಗ ಲಭ್ಯ
Katie
ಒಂದೂ ತಪ್ಪಿಲ್ಲ!
12ರಲ್ಲಿ 12 ಉತ್ತರಗಳೂ ಸರಿ
ಘಟಕ ಮುಗಿದಿದೆ
ಪ್ರವಾಸ
ಮೊದಲ ಪೂರ್ಣ ವಾಕ್ಯ
ಗಟ್ಟಿಯಾಗಿ ಹೇಳಿದ್ದು
ಸತತವಾಗಿ ಐದು ಪಾಠಗಳು
ಒಂದೇ ಬಾರಿಗೆ
ಹೊಸ ಉಡುಗೆ ಸಿಕ್ಕಿತು
5 000 ಖರ್ಚು
ಮುಂದಿನ ಹಂತಕ್ಕೆ!
B1 → B2
ಮಾತನಾಡುವ ಪರೀಕ್ಷೆಯಲ್ಲಿ ಪಾಸ್
ಎರಡನೇ ಪ್ರಯತ್ನದಲ್ಲಿ
ಕಂಪನಿಗಳು ನಮ್ಮನ್ನು ನಂಬಿವೆ
500
+
ಕಂಪನಿಗಳು
Tutoro ಮೂಲಕ ಉದ್ಯೋಗಿಗಳಿಗೆ ಇಂಗ್ಲಿಷ್ ಕಲಿಸುತ್ತಿವೆ
1M
+
ಉದ್ಯೋಗಿಗಳು
ಪ್ರತಿದಿನ ಕಲಿಯುತ್ತಿದ್ದಾರೆ
87
%
ಸಕ್ರಿಯ ಬಳಕೆದಾರರು
90 ದಿನಗಳ ನಂತರವೂ ಅಭ್ಯಾಸ ಮುಂದುವರಿಸುತ್ತಾರೆ
Northbeam
ALTAVIA
Quadra
helioworks
Verado
Tutoro ಜೊತೆ ನಿನ್ನ ಕಂಪನಿಗೆ ಏನೆಲ್ಲ ಸಿಗುತ್ತದೆ
ದಿನಕ್ಕೆ ಕೇವಲ 15 ನಿಮಿಷ, ಅದೂ ಫೋನ್‌ನಲ್ಲೇ. ತರಗತಿಗಾಗಿ ಸಮಯ ನಿಗದಿಪಡಿಸುವ ತಲೆಬಿಸಿಯಿಲ್ಲ. ಇದರಿಂದ ನಿನ್ನ ಕಂಪನಿಗೆ ಏನೆಲ್ಲ ಪ್ರಯೋಜನಗಳಿವೆ ಎಂದು ನೋಡು.
ಒಪ್ಪಂದ ಕುದುರಿಸುವ ಇಂಗ್ಲಿಷ್
ಮಾತು ಸರಿಯಾಗಿ ಅರ್ಥವಾಗದೆ ಅಂತರರಾಷ್ಟ್ರೀಯ ವ್ಯವಹಾರವೊಂದು ಕೈತಪ್ಪಿದೆ ಎಂದು 49% ಅಧಿಕಾರಿಗಳು ಹೇಳುತ್ತಾರೆ. Tutoro ಜೊತೆ ನಿನ್ನ ಉದ್ಯೋಗಿಗಳ ಇಂಗ್ಲಿಷ್ ಕೌಶಲ್ಯ ಬೆಳೆಸು. ವೈಯಕ್ತಿಕ ಶಿಕ್ಷಕರ ವೆಚ್ಚಕ್ಕಿಂತ 50 ಪಟ್ಟು ಕಡಿಮೆ ಖರ್ಚಿನಲ್ಲಿ ಕಲಿಯುವ ಅವಕಾಶ.
ಉದ್ಯೋಗಿಗಳು ತಪ್ಪಿಸಿಕೊಳ್ಳದ ತರಬೇತಿ
ಶಿಕ್ಷಕರ ಜೊತೆ ಕಲಿತದ್ದಕ್ಕಿಂತ AI ಜೊತೆ ಅಭ್ಯಾಸ ಮಾಡಿದಾಗ ಇಂಗ್ಲಿಷ್ ಮಾತನಾಡುವ ಕೌಶಲ್ಯ ಹೆಚ್ಚು ಸುಧಾರಿಸಿದೆ. Tutoro ಅಭ್ಯಾಸವನ್ನು ದಿನಚರಿಯ ಭಾಗವಾಗಿಸುತ್ತದೆ. ಆಟದ ರೀತಿಯ ಚಟುವಟಿಕೆಗಳಿಂದ 88% ಉದ್ಯೋಗಿಗಳು ಇನ್ನಷ್ಟು ಖುಷಿಯಿಂದ ಕಲಿಯುತ್ತಾರೆ.
ಉದ್ಯೋಗಿಗಳ ಪ್ರತಿಭೆ ಬೆಳೆಸು, ನೇಮಕಾತಿ ಖರ್ಚು ಉಳಿಸು
ಕಲಿಕೆಗೆ ಒತ್ತು ಕೊಡುವ ಕಂಪನಿಗಳಲ್ಲಿ ಉದ್ಯೋಗಿಗಳು ಉಳಿಯುವ ಪ್ರಮಾಣ 57% ಹೆಚ್ಚು. ಕಂಪನಿಯೊಳಗೇ ಬೇರೆ ಹುದ್ದೆಗಳಿಗೆ ಸಾಗುವ ಅವಕಾಶಗಳೂ 23% ಹೆಚ್ಚು. ಹಾಗಾಗಿ ಹೊರಗಿನಿಂದ ಜನರನ್ನು ನೇಮಿಸಿಕೊಳ್ಳುವ ಅಗತ್ಯ ನಿನಗೆ ಕಡಿಮೆಯಾಗುತ್ತದೆ.
ಇತರ ಆಯ್ಕೆಗಳಿಗೆ ಹೋಲಿಸಿದರೆ
Tutoro ಯಾಕೆ ಉತ್ತಮ ಆಯ್ಕೆ?
ಉದ್ಯೋಗಿಗಳಿಗೆ ಅನುಕೂಲಕ್ಕೆ ತಕ್ಕಂತೆ ಕಲಿಯುವ ಸ್ವಾತಂತ್ರ್ಯ. ನಿನಗೆ ನಿರ್ವಹಣೆಯ ಕೆಲಸ ಕಡಿಮೆ, ಖರ್ಚಿನ ಲೆಕ್ಕ ಮೊದಲೇ ಸ್ಪಷ್ಟ.
ಆಯ್ಕೆ ಮಾಡಿದ ಪ್ಲಾನ್ ಮತ್ತು ಉದ್ಯೋಗಿಗಳ ಸಂಖ್ಯೆಗೆ ತಕ್ಕಂತೆ ದರ ಬದಲಾಗುತ್ತದೆ
ಗುಂಪು ತರಗತಿಗಳು
ವೈಯಕ್ತಿಕ ಶಿಕ್ಷಕ
Tutoro
ಪ್ರತಿ ಉದ್ಯೋಗಿಗೆ ತಗಲುವ ಖರ್ಚು
ತಿಂಗಳಿಗೆ $180 - $320
ಗಂಟೆಗೆ $40 - $120
ತಿಂಗಳಿಗೆ $9 ರಿಂದ ಆರಂಭ
ಕಲಿಕೆಯ ವೇಳಾಪಟ್ಟಿ
ನಿಗದಿತ ಸಮಯದಲ್ಲಿ ತರಗತಿಗಳು
ಪಾಠಗಳಿಗೆ ಮುಂಚಿತವಾಗಿ ಬುಕ್ ಮಾಡಬೇಕು
ಯಾವಾಗ ಬೇಕಾದರೂ ಕಲಿ, ಬಿಡುವಿನ 15 ನಿಮಿಷವೂ ಸಾಕು
ವೈಯಕ್ತಿಕ ಕಲಿಕೆ ಮತ್ತು ಪ್ರೇರಣೆ
ಇಡೀ ಗುಂಪು ಒಂದೇ ವೇಗದಲ್ಲಿ ಕಲಿಯಬೇಕು, ಆಟದ ಮೂಲಕ ಕಲಿಯುವ ಅವಕಾಶ ಕಡಿಮೆ
ನಿನಗೆ ತಕ್ಕಂತೆ ಕಲಿಸುವುದು ಶಿಕ್ಷಕರ ಮೇಲೆ ಅವಲಂಬಿತ
ಪ್ರತಿಯೊಬ್ಬ ಉದ್ಯೋಗಿಯ ಮಟ್ಟ ಮತ್ತು ಗುರಿಗಳಿಗೆ ತಕ್ಕಂತೆ ಪಾಠಗಳು ಬದಲಾಗುತ್ತವೆ. ಆಟದ ರೀತಿಯ ಚಟುವಟಿಕೆಗಳು ಕಲಿಯುವ ಆಸಕ್ತಿ ಉಳಿಸುತ್ತವೆ
ಎಚ್‌ಆರ್‌ಗೆ ಪ್ರಗತಿಯ ಮಾಹಿತಿ
ಹಾಜರಾತಿ ವರದಿಗಳು
ಎಚ್‌ಆರ್‌ಗೆ ಪ್ರಗತಿಯ ಮಾಹಿತಿ ಕಡಿಮೆ
ಕ್ಷಣಕ್ಷಣದ ಮಾಹಿತಿ ತೋರಿಸುವ ಡ್ಯಾಶ್‌ಬೋರ್ಡ್ + ಕಲಿಕೆಯ ಪ್ರಗತಿ ವರದಿಗಳು
ಇಡೀ ಕಂಪನಿಗೆ ತರಬೇತಿ
ಗುಂಪುಗಳು ಹೆಚ್ಚಿದಷ್ಟೂ ನಿರ್ವಹಣೆ ಕಷ್ಟ
ಒಬ್ಬೊಬ್ಬ ಉದ್ಯೋಗಿ ಸೇರಿದಂತೆ ಖರ್ಚೂ ನಿರ್ವಹಣೆಯ ಕೆಲಸವೂ ಹೆಚ್ಚುತ್ತದೆ
ಎಲ್ಲ ಉದ್ಯೋಗಿಗಳನ್ನೂ ಕಲಿಕೆಗೆ ಸೇರಿಸುವುದು ಸುಲಭ
ಮೊದಲ ಹೆಜ್ಜೆ
ಹೇಗೆ ಕೆಲಸ ಮಾಡುತ್ತದೆ?
ನೀನೇ ಲೈಸೆನ್ಸ್‌ಗಳನ್ನು ಖರೀದಿಸು, ಉದ್ಯೋಗಿಗಳನ್ನು ಆಹ್ವಾನಿಸು. ಇವತ್ತೇ ಮಧ್ಯಾಹ್ನ ಎಲ್ಲರೂ ಅಭ್ಯಾಸ ಶುರುಮಾಡಬಹುದು.
ಕಲಿಯುವವರ ಸಂಖ್ಯೆ ಆಯ್ಕೆಮಾಡು
ಎಷ್ಟು ಉದ್ಯೋಗಿಗಳಿಗೆ, ಎಷ್ಟು ಅವಧಿಗೆ ಚಂದಾ ಬೇಕು ಎಂದು ಆಯ್ಕೆಮಾಡು.
ಸಹೋದ್ಯೋಗಿಗಳನ್ನು ಆಹ್ವಾನಿಸು
ಇಮೇಲ್ ವಿಳಾಸಗಳ ಪಟ್ಟಿಯನ್ನು ಪೇಸ್ಟ್ ಮಾಡು ಅಥವಾ ಸೇರಲು ಒಂದೇ ಲಿಂಕ್ ಎಲ್ಲರಿಗೂ ಕಳುಹಿಸು.
ಅವರು ಮಾತನಾಡಲು ಶುರುಮಾಡುತ್ತಾರೆ
ಉದ್ಯೋಗಿಗಳು ಲಿಂಕ್ ಟ್ಯಾಪ್ ಮಾಡಿದರೆ ಸಾಕು, ಮೊದಲ ಪಾಠ ಶುರುಮಾಡಬಹುದು.
ಅವರ ಪ್ರಗತಿಯನ್ನು ಗಮನಿಸು
Streak, ವಾರದ ಅಭ್ಯಾಸ ಮತ್ತು ಇಂಗ್ಲಿಷ್ ಮಟ್ಟದಲ್ಲಿನ ಪ್ರಗತಿ ಎಲ್ಲವೂ ಒಂದೇ ಪರದೆಯಲ್ಲಿ.
ನಿರಂತರ ಕಲಿಕೆ
ಉದ್ಯೋಗಿಗಳು ಕಲಿಕೆಯನ್ನು ಯಾಕೆ ಬಿಡುವುದಿಲ್ಲ?
ನಿಜವಾದ ಪಾಠ, ಮಾತನಾಡುತ್ತಾ ಕಲಿ
ನೀನು ಮಾತನಾಡು. ನಿನ್ನ ಶಿಕ್ಷಕರು ಉತ್ತರಿಸುತ್ತಾರೆ, ವಿವರಿಸುತ್ತಾರೆ, ಮಾತಿನ ನಡುವೆಯೇ ಅಭ್ಯಾಸಗಳನ್ನೂ ಕೊಡುತ್ತಾರೆ.
ನಿನಗೆ ಬೇಕಾದ ಸಂದರ್ಭಕ್ಕೆ ಅಭ್ಯಾಸ ಮಾಡು
ಉದ್ಯೋಗದ ಸಂದರ್ಶನ, ವೈದ್ಯರ ಜೊತೆ ಮಾತುಕತೆ ಅಥವಾ ಸಾಹಸ ಕಥೆಯಲ್ಲಿ ಭಾಗವಹಿಸುವ ಅಭ್ಯಾಸ ಮಾಡು, ಇಲ್ಲವೇ ನಿನ್ನದೇ ಸನ್ನಿವೇಶ ಬರೆ.
ಯಾರ ಜೊತೆ ಮಾತನಾಡಬೇಕೆಂದು ನೀನೇ ಆರಿಸಿಕೋ
ಒಬ್ಬೊಬ್ಬ ಶಿಕ್ಷಕರ ಉಚ್ಚಾರಣೆಯ ಶೈಲಿ, ಸ್ವಭಾವವೂ ಬೇರೆ. ನಿನಗೆ ಯಾರ ಜೊತೆ ಮಾತನಾಡಲು ಇಷ್ಟವೋ ಅವರನ್ನು ಆರಿಸಿಕೋ.
ಏನು ತಿದ್ದಿಕೊಳ್ಳಬೇಕು ಅಂತ ತಿಳಿದುಕೋ
ಪ್ರತಿ ಪಾಠದ ನಂತರ ನಿನ್ನ ಅಂಕಗಳನ್ನು ನೋಡು. ಯಾವ ತಪ್ಪುಗಳನ್ನು ಮತ್ತೆ ಮತ್ತೆ ಮಾಡುತ್ತಿದ್ದೀಯೋ ತಿಳಿದುಕೋ.
ನೆನಪಿನಲ್ಲಿ ಉಳಿಯುವ ಪದಗಳು
ನೀನು ಮರೆಯುವ ಹೊತ್ತಿಗೆ ಆ ಪದಗಳು ಚಿಕ್ಕ ಆಟಗಳಲ್ಲಿ ಮತ್ತೆ ಬರುತ್ತವೆ, ಚೆನ್ನಾಗಿ ನೆನಪಿನಲ್ಲಿ ಉಳಿಯುವವರೆಗೂ.
ಬರೀ ಸ್ಕ್ರೋಲ್ ಅಲ್ಲ, ಕಲಿಕೆಯ ಹಾದಿ
ಪ್ರತಿ ಪಾಠ ಮುಗಿಸಿದಾಗಲೂ ನಕ್ಷೆಯಲ್ಲಿ ಮುಂದೆ ಸಾಗುತ್ತೀಯ, ಒಂದು ಜಗತ್ತನ್ನು ಮುಗಿಸಿದರೆ ಮುಂದಿನದು ತೆರೆದುಕೊಳ್ಳುತ್ತದೆ.
ಮುಂದಿನ ಹಂತಕ್ಕೇರು. ಆಟದಲ್ಲೂ!
ನಿನ್ನದೇ ಪಾತ್ರವನ್ನು ಸೃಷ್ಟಿಸು, ಪ್ರತಿ ಪಾಠದೊಂದಿಗೆ ಅದರ ಮಟ್ಟ ಏರುತ್ತದೆ, ಮೇಲಿನ ಲೀಗ್‌ಗಳತ್ತ ಸಾಗುತ್ತದೆ.
ಎಚ್‌ಆರ್‌ಗಾಗಿ
ಉದ್ಯೋಗಿಗಳು ಕಲಿಯುತ್ತಿದ್ದಾರಾ ಎಂಬ ಅನುಮಾನ ಇನ್ನು ಬೇಡ
ಯಾರು ಅಭ್ಯಾಸ ಮಾಡುತ್ತಿದ್ದಾರೆ, ಎಷ್ಟು ಮುಂದುವರಿದಿದ್ದಾರೆ, ಅವರ ಇಂಗ್ಲಿಷ್ ಯಾವ ಮಟ್ಟದಲ್ಲಿದೆ ಎಂಬುದೆಲ್ಲ ಒಂದೇ ಡ್ಯಾಶ್‌ಬೋರ್ಡ್‌ನಲ್ಲಿ ಕಾಣುತ್ತದೆ. ವಿವರಗಳಿಗಾಗಿ ಒಬ್ಬೊಬ್ಬರನ್ನೂ ಮತ್ತೆ ಮತ್ತೆ ಕೇಳಬೇಕಿಲ್ಲ.
ಸಿಬ್ಬಂದಿಯ ಚಟುವಟಿಕೆ
ಕಳೆದ 30 ದಿನಗಳು · ಮಾದರಿ ಡೇಟಾ
ಬಳಕೆಯಲ್ಲಿರುವ ಲೈಸೆನ್ಸ್‌ಗಳು
ಖರೀದಿಸಿದ ಲೈಸೆನ್ಸ್‌ಗಳನ್ನು ಪ್ರತಿ ವಾರ ಎಷ್ಟು ಉದ್ಯೋಗಿಗಳು ಬಳಸುತ್ತಾರೆ ಎಂದು ನೋಡು
ಪ್ರತಿ ಉದ್ಯೋಗಿಯ ಇಂಗ್ಲಿಷ್ ಮಟ್ಟ
CEFR ಮಾಪಕದಲ್ಲಿ ಇಂಗ್ಲಿಷ್ ಮಟ್ಟ (A1-C1). ಕಲಿತಂತೆ ಅವರ ಮಟ್ಟವನ್ನು ಅಪ್‌ಡೇಟ್ ಮಾಡುತ್ತೇವೆ.
ಪ್ರತಿ ಉದ್ಯೋಗಿಯ ಕಲಿಕಾ ಚಟುವಟಿಕೆಗಳು
ವಾರದ ಕಲಿಕೆಯ ನಿಮಿಷಗಳು, ಮುಗಿಸಿದ ಪಾಠಗಳು ಮತ್ತು Streak
ಹಣಕಾಸು ವಿಭಾಗ ಕೇಳಿದಾಗಲೆಲ್ಲ ವರದಿಗಳು ಸಿದ್ಧ
ಪರದೆಯಲ್ಲಿ ಕಾಣುವ ಡೇಟಾವನ್ನೇ CSV ರೂಪದಲ್ಲಿ ಡೌನ್‌ಲೋಡ್ ಮಾಡು.
Tutoro ಯಾರಿಗೆ ಸೂಕ್ತ?
ಇಂಗ್ಲಿಷ್ ಸ್ವಲ್ಪ ಸುಧಾರಿಸಿದರೂ ದಿನನಿತ್ಯದ ಕೆಲಸ ಸುಲಭವಾಗುವ ಹುದ್ದೆಗಳಿಗೆ.
ಶುರುಮಾಡು
ಗ್ರಾಹಕ ಸೇವಾ ತಂಡಗಳು
ಮಾರಾಟ
ಎಂಜಿನಿಯರಿಂಗ್
ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು
ಚಿಲ್ಲರೆ ವ್ಯಾಪಾರ
ಆರೋಗ್ಯ ಸೇವೆ
ಮಾರ್ಕೆಟಿಂಗ್
ಯಶಸ್ಸಿನ ಕಥೆಗಳು
ಮೂರು ಕಂಪನಿಗಳಲ್ಲಿ ಏನು ಬದಲಾಯಿತು
ಮೊದಲು ಉದ್ಯೋಗಿಗಳಿಗೆ ಇಂಗ್ಲಿಷ್ ಕಲಿಕೆಯಲ್ಲಿ ಆಸಕ್ತಿ ಉಳಿಸಿಕೊಳ್ಳುವಂತೆ ಮಾಡುವುದು ಕಷ್ಟವಾಗಿತ್ತು. Tutoro ಬಂದ ಮೇಲೆ ಖುಷಿಯಿಂದ ಕಲಿಯುತ್ತಿದ್ದಾರೆ, ಮಧ್ಯದಲ್ಲೇ ಬಿಡುತ್ತಿಲ್ಲ. ಕಂಪನಿ ಕೊಟ್ಟ ಉಪಯುಕ್ತ ಸೌಲಭ್ಯ ಅಂತಲೂ ನೋಡುತ್ತಿದ್ದಾರೆ. ಉದ್ಯೋಗಿಗಳ ತೃಪ್ತಿಯೂ ಹೆಚ್ಚಿದೆ.
ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರು
Northbeam
ನಮ್ಮ ಸಿಬ್ಬಂದಿ ಈಗ ವಿದೇಶಿ ಗ್ರಾಹಕರ ಜೊತೆ ಹೆಚ್ಚು ಆತ್ಮವಿಶ್ವಾಸದಿಂದ ಮಾತನಾಡುತ್ತಾರೆ. ಸಮಸ್ಯೆಗಳನ್ನು ಮೇಲಧಿಕಾರಿಗಳಿಗೆ ಒಪ್ಪಿಸುವ ಸಂದರ್ಭಗಳೂ ಕಡಿಮೆಯಾಗಿವೆ. ಇನ್ನಷ್ಟು ಸ್ಪಷ್ಟವಾಗಿ ಮಾತಾಡಿ, ಹೆಚ್ಚಿನ ಸಮಸ್ಯೆಗಳನ್ನು ತಾವೇ ಬಗೆಹರಿಸುತ್ತಾರೆ. ಗ್ರಾಹಕರಿಗೂ ಉತ್ತಮ ಸೇವೆ ಸಿಗುತ್ತಿದೆ.
ಗ್ರಾಹಕ ಸೇವಾ ಮುಖ್ಯಸ್ಥ
Altavia
ತರಬೇತಿಗೆ ಖರ್ಚು ಮಾಡಿದ ಹಣದಿಂದ ಏನು ಪ್ರಯೋಜನವಾಗುತ್ತಿದೆ ಅನ್ನೋದು ಈಗ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಯಾರು ಎಷ್ಟು ಆಸಕ್ತಿಯಿಂದ ಕಲಿಯುತ್ತಿದ್ದಾರೆ, ಎಷ್ಟು ಪ್ರಗತಿ ಸಾಧಿಸಿದ್ದಾರೆ, ಯಾವ ಕೌಶಲ್ಯಗಳನ್ನು ಇನ್ನಷ್ಟು ಬೆಳೆಸಿಕೊಳ್ಳಬೇಕು ಎಂಬುದನ್ನು Tutoro ಅಂಕಿಅಂಶಗಳು ತೋರಿಸುತ್ತವೆ. ಈಗ ನೈಜ ಡೇಟಾ ಆಧರಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ.
ಮುಖ್ಯ ಕಾರ್ಯಾಚರಣೆ ಅಧಿಕಾರಿ
Helioworks
ಬೆಲೆಗಳು
ಪ್ರತಿ ಉದ್ಯೋಗಿಗೆ ತಿಂಗಳಿಗೆ $9ರಿಂದ ಆರಂಭ
ಎಷ್ಟು ಉದ್ಯೋಗಿಗಳು ಕಲಿಯಲಿದ್ದಾರೆ?
ಒಂದೇ ರಿಯಾಯಿತಿ ದರದಲ್ಲಿ ಎಲ್ಲ ಉದ್ಯೋಗಿಗಳ ಕಲಿಕೆ ಮುಂದುವರಿಸು.
ಪ್ರತಿ ಉದ್ಯೋಗಿಗೆ, ಪ್ರತಿ ತಿಂಗಳು
ಗುಂಪು ತರಗತಿಗಳ ಖರ್ಚು
ವೈಯಕ್ತಿಕ ಟ್ಯೂಷನ್ ಖರ್ಚು
ಒಟ್ಟಿಗೆ ಲೆಕ್ಕ ಹಾಕೋಣ
ಕಲಿಯುವವರ ಸಂಖ್ಯೆ 1,000 ಮೀರಿದರೆ, ನಿನ್ನ ಕಂಪನಿಗೆ ಪ್ರತ್ಯೇಕ ಬೆಲೆ ನಿಗದಿಪಡಿಸುತ್ತೇವೆ. ಹೆಚ್ಚು ಸೀಟ್‌ಗಳಿಗೆ ರಿಯಾಯಿತಿ ಮತ್ತು ಇನ್‌ವಾಯ್ಸ್ ಮೂಲಕ ಪಾವತಿಸುವ ಸೌಲಭ್ಯವೂ ಇದೆ. ನಮ್ಮ ಮಾರಾಟ ವಿಭಾಗ ನಿನ್ನ ಜೊತೆ ಮಾತಾಡಿ ಖರ್ಚಿನ ಲೆಕ್ಕ ತಿಳಿಸುತ್ತದೆ.
ಡೆಮೊ ಬುಕ್ ಮಾಡು
ಚಂದಾದಾರಿಕೆ ಅವಧಿ
ಕಲಿಯುವವರು
Tutoro, ನಿನ್ನ ಪ್ಲಾನ್
ಯಾವಾಗ ಬೇಕಾದರೂ ರದ್ದುಮಾಡು
ಎಷ್ಟು ಉದ್ಯೋಗಿಗಳು ಕಲಿಯಲಿದ್ದಾರೆ?
ಒಂದೇ ರಿಯಾಯಿತಿ ದರದಲ್ಲಿ ಎಲ್ಲ ಉದ್ಯೋಗಿಗಳೂ ಖುಷಿಯಿಂದ ಕಲಿಯಲಿ.
ಸಾಮಾನ್ಯ ಪ್ರಶ್ನೆಗಳು
ನಮ್ಮ ಕಂಪನಿಯಲ್ಲಿ Tutoro ಬಳಸಲು ಶುರುಮಾಡುವುದು ಹೇಗೆ?
ನಿನ್ನ ಕಂಪನಿಯ ಖಾತೆ ತೆರೆದು, ಎಷ್ಟು ಉದ್ಯೋಗಿಗಳಿಗೆ ಸೀಟ್ ಬೇಕು ಎಂದು ಆಯ್ಕೆ ಮಾಡು. ಬಳಿಕ ಅವರಿಗೆ ಆಹ್ವಾನ ಕಳುಹಿಸು. ಪ್ರತಿಯೊಬ್ಬರಿಗೂ ಅವರ ಮಟ್ಟ ಮತ್ತು ಗುರಿಗಳಿಗೆ ತಕ್ಕಂತೆ ಇಂಗ್ಲಿಷ್ ಪಾಠಗಳು ಸಿಗುತ್ತವೆ. ಮೊದಲು Tutoro ಹೇಗೆ ಕೆಲಸ ಮಾಡುತ್ತದೆ ಎಂದು ನೋಡಬೇಕಾ? ಡೆಮೊ ಬುಕ್ ಮಾಡು.
Tutoro ಬೆಲೆ ಎಷ್ಟು? ಪಾವತಿಸುವುದು ಹೇಗೆ?
Tutoro ಬೆಲೆ ಪ್ರತಿ ಉದ್ಯೋಗಿಗೆ ತಿಂಗಳಿಗೆ ಕೇವಲ $9 ಇಂದ ಆರಂಭ. ಕನಿಷ್ಠ 5 ಉದ್ಯೋಗಿಗಳಿಗೆ ಸೀಟ್ ತೆಗೆದುಕೊಳ್ಳಬೇಕು. ಕಾರ್ಡ್ ಮೂಲಕ ಪಾವತಿಸು ಅಥವಾ ಕಂಪನಿಯ ಡ್ಯಾಶ್‌ಬೋರ್ಡ್‌ನಲ್ಲೇ ಇನ್‌ವಾಯ್ಸ್ ರಚಿಸು.
ಒಬ್ಬ ಉದ್ಯೋಗಿಯ ಲೈಸೆನ್ಸ್ ಅನ್ನು ಇನ್ನೊಬ್ಬರಿಗೆ ಕೊಡಬಹುದೇ?
ಹೌದು. ಉದ್ಯೋಗಿ ಕೆಲಸ ಬಿಟ್ಟರೆ ಅಥವಾ ಅವರಿಗೆ ಇನ್ನು ಸೌಲಭ್ಯ ಬೇಡವಾದರೆ, ಆ ಸೀಟ್ ಬೇರೊಬ್ಬರಿಗೆ ಕೊಡು. ಹೀಗೆ ಹೊಸ ಉದ್ಯೋಗಿ ಬಂದಾಗಲೆಲ್ಲ ಹೊಸ ಸೀಟ್ ಖರೀದಿಸುವ ಅಗತ್ಯವಿಲ್ಲ.
ಕಲಿಯುವ ಉದ್ಯೋಗಿಗಳ ಸಂಖ್ಯೆಯನ್ನು ಯಾವಾಗ ಬೇಕಾದರೂ ಹೆಚ್ಚಿಸಬಹುದಾ ಅಥವಾ ಕಡಿಮೆ ಮಾಡಬಹುದಾ?
ನಿನ್ನ ಅಗತ್ಯಕ್ಕೆ ತಕ್ಕಂತೆ ಸೀಟ್‌ಗಳನ್ನು ಹೆಚ್ಚಿಸು ಅಥವಾ ಕಡಿಮೆ ಮಾಡು. ಆದರೆ ಕನಿಷ್ಠ 5 ಸೀಟ್‌ಗಳು ಇರಬೇಕು. ಪಾವತಿಯಲ್ಲಿ ಆಗುವ ಬದಲಾವಣೆಗಳು ನಿನ್ನ ಚಂದಾದಾರಿಕೆಯ ಷರತ್ತುಗಳನ್ನು ಅವಲಂಬಿಸಿರುತ್ತವೆ.
Tutoro ಮೂಲಕ ಉದ್ಯೋಗಿಗಳು ಏನೇನು ಕಲಿಯುತ್ತಾರೆ?
ಇಂಗ್ಲಿಷ್ ಕಲಿಯಲು ಬೇಕಾದ ಎಲ್ಲವೂ Tutoro ಒಂದೇ ಆ್ಯಪ್‌ನಲ್ಲಿ ಸಿಗುತ್ತದೆ. AI ಶಿಕ್ಷಕನ ಜೊತೆ ಪಾಠಗಳು, ಮಾತನಾಡುವ ಅಭ್ಯಾಸ, ಕೇಳಿ ಅರ್ಥಮಾಡಿಕೊಳ್ಳುವುದು, ಓದು ಮತ್ತು ಭಾಗವಹಿಸಿ ಕಲಿಯುವ ಚಟುವಟಿಕೆಗಳು. ಉಚ್ಚಾರಣೆಯನ್ನೂ ಪರಿಶೀಲಿಸಿ, ಏನು ಸರಿಪಡಿಸಬೇಕು ಎಂದು ತಕ್ಷಣ ತಿಳಿಸುತ್ತದೆ.
ಉದ್ಯೋಗಿಗಳ ಇಂಗ್ಲಿಷ್ ಮಟ್ಟಕ್ಕೆ ತಕ್ಕಂತೆ Tutoro ಕಲಿಸುತ್ತದೆಯಾ?
ಹೌದು. ಪ್ರತಿ ಉದ್ಯೋಗಿಗೂ ಅವರ ಮಟ್ಟ ಮತ್ತು ಗುರಿಗಳಿಗೆ ತಕ್ಕ ಕಲಿಕಾ ಯೋಜನೆ ಸಿಗುತ್ತದೆ. ಆಟದಂಥ ಚಟುವಟಿಕೆಗಳು ಆಸಕ್ತಿ ಉಳಿಸಿ, ಕಲಿಯುತ್ತಲೇ ಇರಲು ಪ್ರೇರೇಪಿಸುತ್ತವೆ.
ಉದ್ಯೋಗಿಗಳು ದಿನಕ್ಕೆ ಎಷ್ಟು ಹೊತ್ತು ಕಲಿಯಬೇಕು?
ಒಮ್ಮೆ ಕಲಿಯಲು 15 ನಿಮಿಷ ಸಿಕ್ಕರೂ ಸಾಕು. ಉದ್ಯೋಗಿಗಳು ತಮಗೆ ಬಿಡುವಾದಾಗ ಕಲಿಯಬಹುದು. ತರಗತಿಗೆ ನಿಗದಿತ ಸಮಯವಿಲ್ಲ, ಮುಂಚಿತವಾಗಿ ಪಾಠ ಬುಕ್ ಮಾಡಬೇಕಿಲ್ಲ.
ಉದ್ಯೋಗಿಗಳ ಕಲಿಕೆಯ ಆಸಕ್ತಿಯನ್ನು Tutoro ಹೇಗೆ ಉಳಿಸಿಕೊಳ್ಳುತ್ತದೆ?
Tutoro ಪ್ರತಿಯೊಬ್ಬ ಉದ್ಯೋಗಿಗೂ ತಕ್ಕ ಪಾಠಗಳು, ಆಟದ ರೀತಿಯ ಸವಾಲುಗಳು, ಬಹುಮಾನಗಳು ಮತ್ತು ಆಸಕ್ತಿಯಿಂದ ಪಾಲ್ಗೊಳ್ಳುವ ಚಟುವಟಿಕೆಗಳನ್ನು ನೀಡುತ್ತದೆ. ಹೀಗೆ ಪ್ರತಿದಿನ ಕಲಿಯಬೇಕೆನಿಸುತ್ತದೆ, ಕಲಿಕೆ ಅಭ್ಯಾಸವಾಗುತ್ತದೆ.
ಪ್ರತಿ ಉದ್ಯೋಗಿಯ ಕಲಿಕೆಯ ಪ್ರಗತಿಯನ್ನು ಎಚ್‌ಆರ್ ನೋಡಬಹುದೇ?
ಹೌದು. ಕಂಪನಿಯ ಡ್ಯಾಶ್‌ಬೋರ್ಡ್‌ನಲ್ಲಿ ಯಾರು ಎಷ್ಟು ನಿಯಮಿತವಾಗಿ ಕಲಿಯುತ್ತಿದ್ದಾರೆ, ಎಷ್ಟು ಪ್ರಗತಿ ಸಾಧಿಸಿದ್ದಾರೆ ಎಂದು ನೋಡಬಹುದು. ಇದರಿಂದ ಎಚ್‌ಆರ್‌ಗೆ ಉದ್ಯೋಗಿಗಳ ಭಾಗವಹಿಸುವಿಕೆ ಮತ್ತು ಇಡೀ ತಂಡದ ಬೆಳವಣಿಗೆಯನ್ನು ಗಮನಿಸುವುದು ಸುಲಭ.
ಉದ್ಯೋಗಿಗಳಿಗೆ ಕಂಪನಿಯ ಇಮೇಲ್ ವಿಳಾಸ ಬೇಕಾ?
ಇಲ್ಲ. ಆಹ್ವಾನದ ಕೋಡ್‌ಗೆ ನಿರ್ದಿಷ್ಟ ಇಮೇಲ್ ವಿಳಾಸದ ನಿರ್ಬಂಧವಿಲ್ಲ. ಕೋಡ್ ಬಳಸಿದವರಿಗೆ ಸೀಟ್ ಸಿಗುತ್ತದೆ. ಉದ್ಯೋಗಿ ಈಗಾಗಲೇ ವೈಯಕ್ತಿಕ ಖಾತೆಯಲ್ಲಿ Tutoro ಬಳಸುತ್ತಿದ್ದರೆ, ಅದೇ ಖಾತೆಗೆ ಸೀಟ್ ಸೇರಿಸಬಹುದು. ಅವರ Streak, ಲೀಗ್ ಮತ್ತು ಕಲಿತ ಪದಗಳ ಸಂಗ್ರಹ ಎಲ್ಲವೂ ಹಾಗೆಯೇ ಉಳಿಯುತ್ತವೆ.
ಪ್ರಾರಂಭಿಸಲು ಕನಿಷ್ಠ ಎಷ್ಟು ಉದ್ಯೋಗಿಗಳು ಬೇಕು?
ಕೇವಲ 5 ಉದ್ಯೋಗಿಗಳಿದ್ದರೂ ಕಂಪನಿಯಲ್ಲಿ Tutoro ಶುರುಮಾಡಬಹುದು. ಸಣ್ಣ ಕಂಪನಿಗಳಿಗೂ ಬೆಳೆಯುತ್ತಿರುವ ಕಂಪನಿಗಳಿಗೂ ಇದು ಸೂಕ್ತ.
ದಿನದ ಅಭ್ಯಾಸ, ದೊಡ್ಡ ಪ್ರಗತಿ
ನಿನ್ನ ಉದ್ಯೋಗಿಗಳಿಗೆ ಇಂಗ್ಲಿಷ್ ಕಲಿಯಲು ಇನ್ನಷ್ಟು ಒಳ್ಳೆಯ ದಾರಿ ಕೊಡು. ಪ್ರತಿಯೊಬ್ಬರ ಅಗತ್ಯಕ್ಕೆ ತಕ್ಕ, ಆಸಕ್ತಿಕರ ಪಾಠಗಳು. ಕೆಲಸದ ನಡುವೆಯೂ ಸುಲಭವಾಗಿ ಸಮಯ ಮಾಡಿಕೊಳ್ಳಬಹುದು.
ಶುರುಮಾಡು
ಡೆಮೊ ಬುಕ್ ಮಾಡು